Wednesday, August 27, 2008

ಜಾನಪದ ಗೀತೆ

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು
ಸ್ವಾಮೀ ನನ್ನಯ್ಯ ರಥವೇರಿ
ಬರುವಾಗ ನಾವೆದ್ದು ಕೈಯ್ಯ ಮುಗುದೇವು

ಮಕ್ಕಳಾಟವು ಚಂದ ಮತ್ತೆ ಯೌವನ ಚಂದ
ಮುಪ್ಪಿನಲಿ ಚಂದ ನರೆಗಡ್ಡ
ಜಗದೊಳಗೆ ಎತ್ತ ನೋಡಿದರೂ ನಗು ಚಂದ

ಹಾಲ್ಬೇಡಿ ಅತ್ತಾನ ಕೊಲ್ಬೇಡಿ ಕುಣುದಾನ
ಮೊಸರ್ಬೇಡಿ ಕೆಸರಾ ತುಳುದಾನ
ಕಂದನ ಕುಸುರಾದ ಗೆಜ್ಜೆ ಕೆಸರಾಯ್ತು

ಕಪ್ಪೆಂದು ಜನರನ್ನು ಎತ್ಯಾಡದಿರು ಕಂಡ್ಯ
ಕಪ್ಪಾದ ಹಸುವು ಕರೆದಾರೆ
ಆ ಹಾಲು ಒಪ್ಪೀತು ಶಿವನ ಪೂಜೆಗೆ
ಎಲ್ಲಾದರು ಇರಲವ್ವ ಹುಲ್ಲಾಗಿ ಬೆಳೆಯಾಲಿ
ನೆಲ್ಲಿ ಬುಡ್ಯಾಗಿ ಚಿಗಿಯಾಲಿ
ನನ ಕಂದ ಜಯವನ್ತನಾಗಿ ಮೆರೆಯಾಲಿ
****

9 comments:

ವಿ.ರಾ.ಹೆ. said...

ನಮಸ್ತೆ,

ಸಂಗ್ರಹ ಚೆನ್ನಾಗಿದೆ. ಧನ್ಯವಾದಗಳು
ಇವೆಲ್ಲಾ ಪ್ರಸಿದ್ಧ ಗೀತೆಗಳು ಇತ್ತೀಚೆಗೆ ಮರೆತು ಹೋದಂತಾಗಿದ್ದವು. ಪೂರ್ತಿ ಸಾಹಿತ್ಯವಂತೂ ಎಲ್ಲಿ ಹುಡುಕುವುದೆಂದು ತಿಳಿಯುತ್ತಿರಲಿಲ್ಲ. ಈಗ ಎಲ್ಲ ಇಲ್ಲಿ ನೋಡಿ ಖುಷಿ ಆಗುತ್ತಿದೆ.

ಒಪ್ಪಣ್ಣ, said...

ಉತ್ತಮ ಸಂಗ್ರಹ ಮತ್ತು ಅತ್ಯುತ್ತಮ ಪುಟ ರಚನೆಗಳು.
ಮುಂದುವರಿಸಿ. .

Unknown said...

ಹೂಂ........... ಶಾಲೆಯಲ್ಲಿ ಇದ್ದಾಗ ಕಲಿತ ಪದ್ಯಗಳು .......ಓದ್ತಾ ಹೋದಾಗ ಹಳೇದೆಲ್ಲಾ ನೆನಪಾಯ್ತು..........

Unknown said...

ಬಹಳ ಸಂತಸವಾಯ್ತು - ಹಳೆಯ ಪದ್ಯಗಳನ್ನೂ ಅದರೊಡನೆ ನಮ್ಮ ಬಾಲ್ಯವನ್ನೂ ನೆನೆದು. ಸಂಗ್ರಹಕ್ಕೆ ಅಭಿನಂದನೆಗಳು.
"ನೂಲೋಲ್ಯಾಕ ಚೆನ್ನಿ" ಹುಡುಕುತ್ತಾ ಇದ್ದೆ.. ಸಿಗಬಹುದೇ ?

Yelukotirao said...

ಸರ್ ನೂಲೋಲ್ಯಾಕ ಚೆನ್ನಿ ಹಾಡಿನ ಸಾಹಿತ್ಯ ಸಿಗಬಹುದೇ?

Vinu gange said...

ನೂಲೋಲ್ಯಾಕ ಚೆನ್ನಿ ಹಾಡಿನ ಸಾಹಿತ್ಯ ದಯವಿಟ್ಟು ಗೊತ್ತಿದ್ದವರು ತಿಳಿಸಿ

Vinu gange said...
This comment has been removed by the author.
Unknown said...

ನೂಲೋಲ್ಯಾಕ ಚೆನ್ನಿ ಬೇಕಿತ್ತು

Unknown said...

ನೂಲೋಲ್ಯಾಕ ಚೆನ್ನಿ ಸಾಹಿತ್ಯ ಕೊಡಿ