Monday, March 7, 2011

ಗೆಜ್ಜೆ ಕಾಲು ಕುಣಿಸುತ್ತ ...


ಗೆಜ್ಜೆ  ಕಾಲು ಕುಣಿಸುತ್ತ  
ಗಲುಕು ಗಲುಕು ಎನಿಸುತ್ತ  
ಗಾಲಿ ಮೇಲೆ ಉರುಳುತ್ತ
ಬಾ ಬಾ ಬಸವಣ್ಣ 


ಅತ್ತೆಯ ಮನೆಗೆ ಹೋಗೋಣ 
ಅವರೇ ಕಾಳು ತಿನ್ನೋಣ
ಅಲ್ಲಿಂದಿಲ್ಲಿಗೆ ಓಡೋಣ
ಬಾ ಬಾ ಬಸವಣ್ಣ ಅಜ್ಜನ ಮನೆಗೆ ಹೋಗೋಣ 
ಗೋಲಿ ಬುಗರಿ ಆಡೋಣ 
ಮೇಲೆ ಕೆಳಗೆ ಜಿಗಿಯೋಣ 
ಬಾ ಬಾ ಬಸವಣ್ಣ 
***