Sunday, June 21, 2009

ನನ್ನಪ್ಪ ....ಅಪ್ಪ ಅಪ್ಪ ನನ್ನಪ್ಪ
ಮುದ್ದು ಮಾಡುವ ನನ್ನಪ್ಪವಿದ್ಯೆಯ ಕಲಿಸಿದ ನನ್ನಪ್ಪ
ಬುದ್ದಿಯ ಪೇಳಿದ ನನ್ನಪ್ಪಶಿಸ್ತು ಕಲಿಸಿದ ನನ್ನಪ್ಪ
ಕಷ್ಟವ ಸಹಿಸಿದ ನನ್ನಪ್ಪಜೀವನ ಸ್ಫೂರ್ತಿ ನನ್ನಪ್ಪ
ಭಾವ ಜೀವಿ ನನ್ನಪ್ಪ

***

Friday, June 19, 2009

ಹುಲಿ ಬಂತು ಹುಲಿ..
ಹುಲಿ ಬಂತು ಹುಲಿ

ದೊಡ್ಡ ಪಟ್ಟೆ ಹುಲಿಬೇಟೆಯಾಡಿ ಹಸಿವು
ಕಳೆದು ಬಂದಿತೀಗ ಹುಲಿಕಾಡಿನಿಂದ ಹೊರಗೆ

ಬಂದು ನಿಂದಿತೀಗ ಹುಲಿಶಿಸ್ತಿನಿಂದ ಇರುವ ಕಲೆಯ

ಇದನು ನೋಡಿ ಕಲಿ


***

Thursday, June 18, 2009

ಜಿಂಕೆ ಮರಿ ...
ಪುಟ್ಟ ಪುಟ್ಟ
ಹೆಜ್ಜೆ ಇಟ್ಟು
ಬರುವ ಜಿಂಕೆ ಮರಿಮೈಯ ತುಂಬ
ಚುಕ್ಕೆ ಇರುವ
ಪುಟ್ಟ ಜಿಂಕೆ ಮರಿಎಲೆಯ ಚಿಗುರ
ಸವಿದು ಮೆಲುವ
ಮುದ್ದು ಜಿಂಕೆ ಮರಿಕುಣಿದು ನಲಿದು
ಅಮ್ಮನೊಡನೆ ಬರುವ
ಜಾಣ ಮರಿ
***

Wednesday, June 17, 2009

ಆನೆ ಬಂತಣ್ಣ ...ಆನೆ ಬಂತಣ್ಣ
ನಮ್ಮೂರಿಗೆ
ಆನೆ ಬಂತಣ್ಣ


ಪುಟ್ಟ ಕಣ್ಣಿನ
ಮೋಟು ಬಾಲದ
ಆನೆ ಬಂತಣ್ಣ


ಮೊರದ ಕಿವಿಯ
ನೀಳ ಸೊಂಡಿಲ
ಆನೆ ಬಂತಣ್ಣ


ದಪ್ಪನೆ ದೇಹದ
ಉದ್ದನೆ ದಂತದ
ಆನೆ ಬಂತಣ್ಣ


ಆನೆ ಬಂತಣ್ಣ
ನಮ್ಮೂರಿಗೆ
ಆನೆ ಬಂತಣ್ಣ

***

Tuesday, June 16, 2009

ಮಳೆ ಬಂತು ಮಳೆ...ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ


ಮಣ್ಣಿನಲ್ಲಿ ಜಾರಿ ಬಿದ್ದು
ಬಟ್ಟೆಯಾಯ್ತು ಕೊಳೆ


ಬಿಸಿಲು ಬಂತು ಬಿಸಿಲು
ಕೋಟು ಟೋಪಿ ತೆಗೆ


ಬಾವಿಯಿಂದ ನೀರು ಸೇದಿ
ಸೋಪು ಹಾಕಿ ಒಗೆ

***

Monday, June 15, 2009

ಪುಟ್ಟ ಗುಬ್ಬಿ ..
ಗುಬ್ಬಿ ಗುಬ್ಬಿ

ಚಿಂವ್ ಚಿಂವ್ ಎಂದು

ಹಾರುತ ಬಂದಿಹೆಯಾಸುರಿಯುವ ಮಳೆಯ

ನೀರಲಿ ನೆನೆದು

ನಡುಗುತ ನಿಂತಿಹೆಯಾ ?ಬಾಗಿಲ ತೆರೆದು

ಕಾಳನು ಹಿಡಿದು

ನಿಂದಿಹೆ ನಾನೀಗಬೇಗನೆ ಹತ್ತಿರ

ಹಾರುತ ಬಂದು

ಕಾಳನು ತಿನ್ನುವೆಯಾ?


***

Friday, June 12, 2009

ಯಾರು ಏನು ಮಾಡಬೇಕು?

ಕೊಕ್ಕೋ ಕೊಕ್ಕೋ ಕೋಳಿ
ಬೆಳಗಾಯ್ತು ಏಳಿ
ಚಿಂವ್ ಚಿಂವ್ ಇಲಿ
ಮಾಡಿನಿಂದ ಇಳಿ


ಅಂಬಾ ಅಂಬಾ ಕರುವೇ
ಹುಲ್ಲು ಹೊತ್ತು ತರುವೆ


ಮಿಯಾಂವ್ ಮಿಯಂವ್ ಬೆಕ್ಕೇ
ಕದ್ದು ಹಾಲು ನೆಕ್ಕೆ


ಬೌ ಬೌ ನಾಯಿ
ಸಾಕು ಮುಚ್ಚು ಬಾಯಿ


ಬುಸ್ ಬುಸ್ ಹಾವು
ಗೆಳೆಯರಲ್ಲ ನಾವು !

***


Thursday, June 11, 2009

ನಮ್ಮ ಕರು ....ಅಮ್ಮನ ಕೆಚ್ಚಲ
ಹಾಲನು ಕುಡಿದು


ಬಾಲವ ಎತ್ತಿ
ಚಂಗನೆ ನೆಗೆದು


ಓಡುತ ಬರುವ
ನಮ್ಮ ಕರು


ಕೆಂಪನೆ ಬಣ್ಣದ
ನಮ್ಮ ಕರು


ಹಸಿರಿನ ಹುಲ್ಲನು
ಮೆಲ್ಲನೆ ಸವಿದು


ಕಿವಿಯನು ನಿಮಿರಿಸಿ
ಅಂಬಾ ಎಂದು


ಅಮ್ಮನ ಕರೆಯುವ
ನಮ್ಮ ಕರು


ಮುದ್ದಿನ ಪುಟಾಣಿ
ನಮ್ಮ ಕರು .

***

Tuesday, June 9, 2009

ಕಾಗೆ ...ಕಾ ಕಾ ಕಾ ಎಂದು
ಕೂಗಿ ಹೇಳುವೆ


ನಾನು ಏಳುವ ಮೊದಲೇ
ನೀನು ಏಳುವೆ !


ದಿನವು ಬೆಳಗು ಸಂಜೆಯಲ್ಲಿ
ನೀನು ಕೂಗುವೆ


ಮಲಿನವನ್ನು ತೆಗೆದು ಶುಚಿಯ
ನೀನು ಮಾಡುವೆ


ಹೊಳೆವ ಕಪ್ಪು ಬಣ್ಣ ನಿನಗೆ
ಚೂಪು ಕೊಕ್ಕು ಅಂದ


ದಿನವು ಬಾರೋ ನೀನು
ಎಂದು ಕರೆವನೀಗ ಕಂದ

***

Saturday, June 6, 2009

ಮಂಗಣ್ಣ ...ಗೋಡೆಯಾಚೆಗೆ ಇಣುಕಿ
ನೋಡುವೆಯೇನು ಮಂಗಣ್ಣ ?


ಕಾಡನು ಬಿಟ್ಟು ಇಲ್ಲಿಗೆ
ನೀನು ಬಂದ ಕಾರಣವೇನಣ್ಣ ?


ಹಸಿವೆಯ ನೀಗಿಸೆ ಹಣ್ಣುಗಳು
ಬೇಕೆ ನಿನಗೆ ಮಂಗಣ್ಣ ?


ಮೆಲ್ಲನೆ ಇಳಿದು ಹತ್ತಿರ ಬಂದರೆ
ಎಲ್ಲವ ಕೊಡುವೆ ನಿನಗಣ್ಣ

***

Wednesday, June 3, 2009

ಪುಟ್ಟನ ಕನಸು ...

ಪುಟಾಣಿ ಪುಟ್ಟ ನಿದ್ದೆಯಲೊಂದು
ಕಂಡ ಕನಸನ್ನು

ಅಣ್ಣನ ಕೂಡೆ ತಾರಾಲೋಕಕೆ
ಹೋದ ಕನಸನ್ನು

ಬೆಳ್ಳಿಯ ಚುಕ್ಕಿಯ ಮುಟ್ಟುತ
ಆಟವನಾಡಿದ ಕನಸನ್ನು

ಮೋಡದಿ ತೇಲುತ ಮೆಲ್ಲನೆ
ಮೇಲಕೆ ಜಿಗಿದ ಕನಸನ್ನು

ಓಡುತ ಆಡುತ ದಿನವಿಡೀ
ಕಳೆಯುತಲಿದ್ದ ಕನಸನ್ನು

ಪಕ್ಕನೆ ಅಮ್ಮನು ಕರೆದಂತಾಗೆ
ತೆಗೆದಾ ಮುಸುಕನ್ನು !
***

Tuesday, June 2, 2009

ಗುಡುಗು....ಗುಡು ಗುಡು ಭೀಕರ
ಸದ್ದನು ಮಾಡುತ
ಬರುವುದೇಕೆ ಗುಡುಗು ?

ಜಡಿಮಳೆಯೊಂದಿಗೆ
ಸೇರುತ ಭೂಮಿಗೆ
ಬರುವುದೇಕೆ ಗುಡುಗು ?ಎದೆಯಲಿ ಢವ ಢವ
ಕಸಿವಿಸಿ ಹೆದರಿಕೆ
ಮಾಡುವುದೇಕೆ ಗುಡುಗು ?ತೊಡಗಲು ರೈತರು
ಗದ್ದೆಯ ಕೆಲಸಕೆ
ಕಾಡುವುದೇಕೆ ಗುಡುಗು ?
***

Monday, June 1, 2009

ಮಿಂಚು ...


ಬಾನಿನಿಂದ ತೆಗೆವ
ಛಾಯಚಿತ್ರವೇನು ಮಿಂಚು ?


ಹೊಳೆಯುತಿಹುದು ಗಗನವೊಮ್ಮೆ
ಯಾರದಮ್ಮ ಸಂಚು ?


ಕ್ಷಣಕ್ಕೊಮ್ಮೆ ಹೊಳೆದು
ಮಾಯವಾಗುವುದೀ ಮಿಂಚು


ನೋಡಿದರೆ ಕಾಣುವುದು
ಬಾನು ಭುವಿಯ ಅಂಚು

***