Thursday, April 30, 2009

ಪುಟ್ಟ ಇರುವೆಪುಟ್ಟದೊಂದು ಇರುವೆ
ಹೆಕ್ಕಿ ಚೂರು ಸಕ್ಕರೆ
ಹೋಗುತಿದೆ ತನ್ನ ಮನೆಗೆ
ಪುಳಕದಿಂದ ಆ ಕಡೆ


ಇರುವೇಗೆಕೆ ಸಕ್ಕರೆ
ಅಷ್ಟೊಂದು ಅಕ್ಕರೆ
ಪುಟ್ಟ ಚೂರು ಸಿಕ್ಕರೆ
ಬಿಡದೆ ಒಯ್ವುದಾಕಡೆ ?

ಒಮ್ಮೆ ಅಮ್ಮ ಸಿಕ್ಕರೆ
ನನ್ನ ನೋಡಿ ನಕ್ಕರೆ
ಪ್ರಶ್ನೆ ಕೇಳಿ ಬಿಟ್ಟರೆ
ಕೊಡುವಳೇನು ಉತ್ತರ ?
***

Monday, April 20, 2009

ಗೂಡಿನೆಡೆಗೆ ತೆರಳುವ .....ಹೊತ್ತು ಹೋಯಿತು ಕತ್ತಲಾಯಿತು
ದಿನಪನಸ್ತಕೆ ಪೋದನು


ದಿನದ ಕೆಲಸದ ದಣಿವ ನೀಗಲು
ಬಾರೆ ನಾವು ಹೋಗುವ


ಬೆಳಕು ಕಳೆದುದು ದಿನವು ಮುಗಿದುದು
ಮೆಲ್ಲ ಮನೆಯನು ಸೇರುವ


ಅಳುವ ಮಕ್ಕಳು ಕಾಯುತಿರುವರು
ಗೂಡಿನಲ್ಲಿ ಮೆಲ್ಲನೆ


ಗುಟಕ ನೀಡುತ ಹಸಿವ ನೀಗುತ
ಸುಖದ ನಿದ್ದೆಗೆ ಜಾರುವ

***

Sunday, April 19, 2009

ಕೆರೆ ...ಕೆರೆ ಕೆರೆ ನಮ್ಮ ಕೆರೆ

ಕುಡಿವ ನೀರು ಕೊಡುವ ಕೆರೆ

ದೇವರು ಸ್ನಾನ ಮಾಡುವ ಕೆರೆಪುಟ್ಟ ಮೀನು ಇರುವ ಕೆರೆ

ದೊಡ್ಡ ಆಮೆ ಇರುವ ಕೆರೆ

ಸುತ್ತ ಮೆಟ್ಟಿಲು ಇರುವ ಕೆರೆಕೆರೆ ಕೆರೆ ನಮ್ಮ ಕೆರೆ

ಊರಿಗೊಂದು ದೊಡ್ಡ ಕೆರೆ

ತಂಪು ನೀರು ಕೊಡುವ ಕೆರೆ

ನಮ್ಮ ನೆಚ್ಚಿನ ದೊಡ್ಡ ಕೆರೆ ..


***Wednesday, April 1, 2009

ಪುಣ್ಯ ಕ್ಷೇತ್ರ ನೋಡಿದೆನು ....


ಪುಣ್ಯ ಕ್ಷೇತ್ರಕೆ ಹೋಗಿ

ನಾನು ಹರಕೆ ಮಂಡೆಯ

ನೀಡಿದೆನುಹರಿಯುವ ನದಿಯಲಿ ಸ್ನಾನವ

ಮಾಡಿ ದೇವರ ದರುಶನ
ಮಾಡಿದೆನುಸರತಿಯ ಸಾಲಲಿ ಮೊದಲಿಗನಾಗಿ

ಭೋಜನ ಶಾಲೆಯ

ಸೇರಿದೆನುಊಟವ ಮಾಡುತ ಕೈಗಳ

ತೊಳೆದು ಮೆಲ್ಲನೆ ಹೊರಗೆ

ಬಂದಿಹೆನು
ನಿಮ್ಮ ನಮ್ಮ ಎಲ್ಲರ

ದೇವನು ಪೊರೆಯಲಿ ಎಂದು

ಬೇಡಿದೆನು .

***