Thursday, December 18, 2008

ಗೊಂಬೆ

ಮರದಲಿ ಮಾಡಿದ ಚೆಲುವಿನ ಗೊಂಬೆ
ಕರಚಳಕದಿ ಕೊರೆ ಕೊರೆದಿಹ ಗೊಂಬೆ
ಗರ ಗರ ತಿರುಗುವ ಮಾಟದ ಗೊಂಬೆ
ಕಿರಿಯರು ಹಿರಿಯರು ಮೆಚ್ಚುವ ಗೊಂಬೆ
ಚಿನ್ನದ ಹಾಗೆ ಹೊಳೆಯುವ ಗೊಂಬೆ
ರನ್ನದ ಹಾಗೆ ಮಿನುಗುವ ಗೊಂಬೆ
ಕಣ್ಣನು ಮಿಟುಕಿಸಿ ಆಡುವ ಗೊಂಬೆ
ಪಿಂ ಪಿಂ ಪಿಂ ಪಿಂ ಎನ್ನುವ ಗೊಂಬೆ
ಕು೦ಯ ಕು೦ಯ ಕು೦ಯ ಕು೦ಯ ಎನ್ನುವ ಗೊಂಬೆ
ಕೊಳ್ಳಿರಿ ಮಕ್ಕಳು ಪೀಂ ಪೀಂ ಗೊಂಬೆ
ಕೊಳ್ಳಿರಿ ಕ್ಯುಮ್ ಕ್ಯುಮ್ ಎನ್ನುವ ಗೊಂಬೆ
ಬನ್ನಿರಿ ಬನ್ನಿರಿ ಮುಂದಕೆ ನುಗ್ಗಿ
ಚನ್ನಿಗ ಬಂದನು ಭರದಿಂ ನುಗ್ಗಿ
ಕಂದನಿಗೆನ್ನುತ ನೋಡಿದ ಬಾಗಿ
ಗೊಂಬೆಯ ಕೊಂಡನು ಹರ್ಷಿತನಾಗಿ
(ಕವಿ: ಶಾ೦ತಿರಾಂ )
***

1 comment:

RAJ KM said...

ಒಳ ಹೊಕ್ಕರೆ ಚಿಣ್ಣರ ಲೋಕ
ಕಣ್ಣಾಡಿಸಿದರೆ ಬಣ್ಣದ ಲೋಕ
ಬಗೆ ಬಗೆ ಪದ್ಯದ ಮಕ್ಕಳ ಲೋಕ
ಕಿರು ನಗೆ ತುಂಬಿಹ ಸುಂದರ ಲೋಕ
ಬನ್ನಿರಿ ಓದಿರಿ ಓದುತ ಸವಿಯಿರಿ
ಚಿಣ್ಣರ ಕಾವ್ಯದ ಸವಿಯನು ತಿಳಿಯಿರಿ
ಓದುತ ಓದುತ ಕಿರುನಗು ಬಂದರೆ
ಬೆಲೆಯದು ಓದಿಗೆ ಓದುತ ತಂದಿರೆ.