Friday, February 6, 2015

ಪ್ರಾರ್ಥನೆ


ಅಖಿಲಾಂಡ ಮಂಡಲದೊಳು ರೂಪ ತಾಳಿ
ಅದರೊಳಗೆ ಆನಂದ ರೂಪವ ಬೀರಿ
ಅಣುರೇಣು  ತೃಣ ಕಾಷ್ಠವೆಲ್ಲವ ಸೇರಿ
ಪರಮಾತ್ಮರೂಪನೆ  ನಮಿಪೆವು ಬಾಗಿ

ಮನುಜನ ದಿನಪನ ತಾರೆಯನೆಲ್ಲ
ಧರೆಯೊಳಗೆ ತೋರುವ ಪ್ರಾಣಿ ಯನೆಲ್ಲ
ಅನುದಿನವು ಎಡೆಬಿಡದೆ ಕಾಯುವರಾರು
ಅವಗೆಮ್ಮ ಕಾಣಿಕೆ ನೀಡುವ ಬಾರೊ

ಜಯ ಜಯ ಕರುಣೆಯ ಕಣಜವೇ ಜಯತು
ಜಯಜಯ ಜ್ಯೋತಿಯ ಪುಂಜವೇ ಜಯತು
ಜಯ ಜಯ ಮಂಗಳ ಮೂರ್ತಿಯೇ ಜಯತು
ಜಯ ಜಯ ಸತ್ಯ ಸ್ವರೂಪನೆ  ಜಯತು

                                                    Photo courtesy : Sri Shivaram H Doddamani

3 comments:

YAKSHA CHINTANA said...

ಇದೇ ಹಾಡು ಮಲಯಾಳಂ ನಲ್ಲೂ ಇದೆ. ನಾವು ಶಾಲೆಗೆ ಹೋಗುವಾಗ ಹಾಡ್ತಿದ್ರು...ಕನ್ನಡದಲ್ಲಿ ನೋಡಿ ಸಂತೋಷವಾಯಿತು.

Anonymous said...

ನಾವು ಶಾಲೆಗೆ ಹೋಗುತ್ತಿದ್ದಾಗ ಇದೆ ಹಾಡು ನಮಗೆ ಪ್ರಾರ್ಥನೆಯಾಗಿತ್ತು. 4 ಜನ ಏಳನೇ ತರಗತಿ ಮಕ್ಕಳು ಈ ಹಾಡನ್ನು ದ್ವಜ ಸ್ತಂಭ ಬಳಿ ನಿಂತು ಹಾಡುತ್ತಿದ್ದರು. ನಾವೆಲ್ಲ ಕೈಮುಗಿದು ನಿಲ್ಲುತ್ತಿದ್ದೆವು... ಒಳ್ಳೆಯ ಹಾಡು... ಒಳ್ಳೆಯ ಬ್ಲಾಗ್..

Unknown said...

nice one...!!!

could you please once visit ammanahaadugalu.blogspot.com
and share your suggestions as I am new to kannada blog