ಅಖಿಲಾಂಡ ಮಂಡಲದೊಳು ರೂಪ ತಾಳಿ
ಅದರೊಳಗೆ ಆನಂದ ರೂಪವ ಬೀರಿ
ಅಣುರೇಣು ತೃಣ ಕಾಷ್ಠವೆಲ್ಲವ ಸೇರಿ
ಪರಮಾತ್ಮರೂಪನೆ ನಮಿಪೆವು ಬಾಗಿ
ಮನುಜನ ದಿನಪನ ತಾರೆಯನೆಲ್ಲ
ಧರೆಯೊಳಗೆ ತೋರುವ ಪ್ರಾಣಿ ಯನೆಲ್ಲ
ಅನುದಿನವು ಎಡೆಬಿಡದೆ ಕಾಯುವರಾರು
ಅವಗೆಮ್ಮ ಕಾಣಿಕೆ ನೀಡುವ ಬಾರೊ
ಜಯ ಜಯ ಕರುಣೆಯ ಕಣಜವೇ ಜಯತು
ಜಯಜಯ ಜ್ಯೋತಿಯ ಪುಂಜವೇ ಜಯತು
ಜಯ ಜಯ ಮಂಗಳ ಮೂರ್ತಿಯೇ ಜಯತು
ಜಯ ಜಯ ಸತ್ಯ ಸ್ವರೂಪನೆ ಜಯತು
Photo courtesy : Sri Shivaram H Doddamani
3 comments:
ಇದೇ ಹಾಡು ಮಲಯಾಳಂ ನಲ್ಲೂ ಇದೆ. ನಾವು ಶಾಲೆಗೆ ಹೋಗುವಾಗ ಹಾಡ್ತಿದ್ರು...ಕನ್ನಡದಲ್ಲಿ ನೋಡಿ ಸಂತೋಷವಾಯಿತು.
ನಾವು ಶಾಲೆಗೆ ಹೋಗುತ್ತಿದ್ದಾಗ ಇದೆ ಹಾಡು ನಮಗೆ ಪ್ರಾರ್ಥನೆಯಾಗಿತ್ತು. 4 ಜನ ಏಳನೇ ತರಗತಿ ಮಕ್ಕಳು ಈ ಹಾಡನ್ನು ದ್ವಜ ಸ್ತಂಭ ಬಳಿ ನಿಂತು ಹಾಡುತ್ತಿದ್ದರು. ನಾವೆಲ್ಲ ಕೈಮುಗಿದು ನಿಲ್ಲುತ್ತಿದ್ದೆವು... ಒಳ್ಳೆಯ ಹಾಡು... ಒಳ್ಳೆಯ ಬ್ಲಾಗ್..
nice one...!!!
could you please once visit ammanahaadugalu.blogspot.com
and share your suggestions as I am new to kannada blog
Post a Comment