Wednesday, May 13, 2009

ಮಂಗಳ ಪದ್ಯ ...



ಜಲದಲಿ ಮತ್ಸ್ಯವತಾರನಿಗೆ

ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ

ಧರೆಯನುದ್ಧರಿಸಿದ ವರಾಹವತಾರಗೆ

ತರಳನ ಕಾಯ್ದ ನರಸಿಂಹನಿಗೆ

ಭೂಮಿಯ ದಾನವ ಬೇಡಿದಗೆ

ಆ ಮಹಾ ಕ್ಷತ್ರಿಯರ ಗೆಲಿದವಗೆ

ರಾಮಚಂದಿರನೆಂಬ ದಶರಥ ಸುತನಿಗೆ

ಭಾಮೆಯರರಸ ಗೋಪಾಲನಿಗೆ

ಬತ್ತಲೆ ನಿಂತಿಹ ಬೌದ್ಧನಿಗೆ

ಅರ್ತಿಯಿ೦ದ ಹಯವೇರಿದ ಕಲ್ಕ್ಯನಿಗೆ

ಹತ್ತವತಾರದಿ ಭಕ್ತರ ಪೊರೆಯುವ

ಅಚ್ಚ್ಯುತ ಪುರಂದರ ವಿಠಲನಿಗೆ . ಮಂಗಳಂ

-ಪುರಂದರದಾಸರು


(ಶಾಲೆಯಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದ್ದ "ಭಜನೆ" ಯಲ್ಲಿ ಹಾಡುತ್ತಿದ್ದ ಮಂಗಳ ಪದ್ಯ )

***

4 comments:

ಚೆ೦ಬಾರ್ಪು said...

engala shaleloo shukravarada bhajanege ittu idu. eega maadidare mastrakkala mele case akku, komuvada hELi

YAKSHA CHINTANA said...

ನಾವು ಬಾಲ್ಯದಲ್ಲಿ ಹಿರಿಯರ ಒತ್ತಾಯಕ್ಕೆ ಕಟ್ಟುಬಿದ್ದು ಸಾಯಂಕಾಲದ ಹೊತ್ತು ಭಜನೆ ಮಾಡುತ್ತಿದ್ದೆವು. ಆವಾಗ ಈ ಭಜನೆಗೆ ಮನಸ್ಸು ಹಾತೊರೆಯುತ್ತಿತ್ತು.. ಎಷ್ಟು ಹೊತ್ತಿಗೆ ಈ ಭಜನೆ ಸರದಿ ಎಂದು ಮತ್ತೆ ಭಜನ ಕಾರ್ಯಕ್ರಮ ಮುಗಿದು ನಿರಾಳವೆನ್ನಿಸಿ ಪ್ರಸಾದ ತಿನ್ನಲು ಕಾಯುತ್ತಿದ್ದೆವು. ಹಾಗಾಗಿ ಈ ಮಂಗಳ ಭಜನೆ ಒಂದು ರೀತಿ ಇಷ್ಟವಾಗುತ್ತಿತ್ತು

Anonymous said...

appu bhava. ega madire adakke "pragatiparara ?" okkutada teevra viroda bakku.. ivakke "gandhiji", "ambedkar" patangala kannada, inglishu, hindi , edigare lekka, vijnanalloo sersire adu jatyateeta, nishpakshapata avtu!

heli sukha ille
-Ramamurty,
Asst.Teacher,
mangalore

chirantana said...

In simple words how beautifully coined this song. really nice one :)