Friday, January 16, 2009

ನಾಯಿ ಮರಿ

ತೋಟದ ಮನೆಯ
ಪಕ್ಕದ ಗೂಡಲಿ
ನಾಯಿ ಮರಿ ಕುಳಿತಿತ್ತು
ಹಾರುತ ಬಂದ
ಮಂಗನ ನೋಡಿ
ಕುಂಯ್ ಕುಂಯ್ ಅಂದಿತ್ತು
ಅಮ್ಮ ನಾಯಿಯು
ಇದನು ಕಂಡು
ಓಡುತ ಬಂದಿತ್ತು
ಮರದ ಮೇಲಿನ
ಮಂಗನ ಕಂಡು
ಬೌ ಬೌ ಬೊಗಳಿತ್ತು
ನಾಯಿಯ ಕಂಡು
ಮಂಗನು ಬೇಗನೆ
ಓಡಲು ತೊಡಗಿತ್ತು
ಅಮ್ಮ ನಾಯಿಯು
ಮರಿಯನು ನೆಕ್ಕುತ
ಮುದ್ದು ಮಾಡಿತ್ತು .
***

1 comment:

ಪುಟ್ಟಿಯ ಅಮ್ಮ said...

ನಿಮ್ಮ ಬ್ಲಾಗ್ ನೋಡಿ ಬಹಳ ಖುಶಿಯಾಯಿತು.