Monday, November 3, 2008

ಮೀನು

ನೀರಿನಲ್ಲಿ ಈಜುವ ಮೀನು
ಏನನು ಹುಡುಕುತ ಸುತ್ತುವೆ ನೀನು ?
ರೆಕ್ಕೆಯ ಬೀಸಿ ಈಜುವೆ ನೀನು
ಕೈಯನು ಬೀಸಿ ನಡೆಯುವೆ ನಾನು
ಬಾಲವ ಬೀಸಿ ಓಡುವೆ ನೀನು
ಕಾಲಿನಿಂದಲೇ ಓಡುವೆ ನಾನು
ಹಿಡಿಯಲು ಬಂದರೆ ಸಿಗದಿರೆ ನೀನು
ಬಲೆಯನು ಬೀಸಿ ಹಿಡಿಯುವೆ ನಾನು !
ನಿನ್ನ ಹಾಗೆ ಈಜುವ ಆಸೆಯು ನನಗೆ
ನನ್ನ ಹಾಗೆ ಓಡುವ ಆಸೆಯೇ ನಿನಗೆ ?
***

1 comment:

Roopa said...

ನಿಮ್ಮ ಈ ಕವನಕ್ಕೆ ಮೀನಿನ ಆಕಾರ ಕೊಟ್ಟಿರುವೆ ನೋಡಿ. ನಿಮ್ಮ ಅನುಮತಿಯಿಲ್ಲದೆ ಪ್ರಯೋಗಿಸಿದಕ್ಕೆ ಕ್ಷಮೆಯಿರಲಿ.
www.roopashriblog.blogspot.com