ಅಪ್ಪನು ಕೊಡಿಸಿದ
ದೊಡ್ಡ ಚೆಂಡು
ಕಾಲಲಿ ಒದೆಯುವ
ದೊಡ್ಡ ಚೆಂಡು
ಗೆಳೆಯರ ಕೂಡಿ
ಆಡುವ ಚೆಂಡು
ಒಂದೇ ಒದೆತಕೆ
ಹಾರುವ ಚೆಂಡು
ಆಗಸದೆತ್ತರ
ಪುಟಿಯುವ ಚೆಂಡು
ಅಪ್ಪನು ಕೊಡಿಸಿದ
ದೊಡ್ಡ ಚೆಂಡು
ಕಾಲಲಿ ಒದೆಯುವ
ದೊಡ್ಡ ಚೆಂಡು
ದೊಡ್ಡ ಚೆಂಡು
ಕಾಲಲಿ ಒದೆಯುವ
ದೊಡ್ಡ ಚೆಂಡು
***
ಮುಗ್ಧ ಮನಸಿನ ಸುಪ್ತ ಸಂತೋಷ ....
ಎನ್ನನು ಸಲಹೈ ದೇವ
ಸಕಲವ ಕೊಡು ನೀ ದೇವ
ತಾಯಿಯು ನೀನೆ ತಂದೆಯು ನೀನೆ
ಬಂಧುವು ನೀನೆ ದೇವ
ನಿನ್ನ ನೆನಹದು ಎನ್ನೀ ಹೃದಯದಿ
(kavi : ಪಳ್ಳತ್ತಡ್ಕ ಸುಬ್ರಾಯ ಭಟ್ )
***