Friday, June 12, 2009

ಯಾರು ಏನು ಮಾಡಬೇಕು?

ಕೊಕ್ಕೋ ಕೊಕ್ಕೋ ಕೋಳಿ
ಬೆಳಗಾಯ್ತು ಏಳಿ
ಚಿಂವ್ ಚಿಂವ್ ಇಲಿ
ಮಾಡಿನಿಂದ ಇಳಿ


ಅಂಬಾ ಅಂಬಾ ಕರುವೇ
ಹುಲ್ಲು ಹೊತ್ತು ತರುವೆ


ಮಿಯಾಂವ್ ಮಿಯಂವ್ ಬೆಕ್ಕೇ
ಕದ್ದು ಹಾಲು ನೆಕ್ಕೆ


ಬೌ ಬೌ ನಾಯಿ
ಸಾಕು ಮುಚ್ಚು ಬಾಯಿ


ಬುಸ್ ಬುಸ್ ಹಾವು
ಗೆಳೆಯರಲ್ಲ ನಾವು !

***


7 comments:

YAKSHA CHINTANA said...

ಇದಕ್ಕೆ ಇನ್ನು ಇದೆ ಸುಬ್ಬಣ್ಣ,


ಚಿಂವ್ ಚಿಂವ್ ಇಲಿ . ಮಾಡಿನಿಂದ ಇಳಿ
ಮೇ ಮೇ ಆಡು ನಿನಗೆ ಎರಡು ಕೋಡು
ಸಣ್ಣದಿರುವಾಗ ಆಮ್ಮ ಹೇಳ್ತಿದ್ದ ನೆನಪು

ಸುಬ್ರಹ್ಮಣ್ಯ ಭಟ್ said...

oo howdu nanage iste nenapu iruvudu !

dayavittu poorti hadu odagisi koduviraa rajanaa ??

Roopa said...

ಇಲ್ಲಿದೆ ನೋಡಿ ಸರ್ ಈ ಹಾಡು
http://www.youtube.com/watch?v=XfRTOz8V5Vk&feature=PlayList&p=89E0BD525B652687&playnext=1&playnext_from=PL&index=38

ಸುಬ್ರಹ್ಮಣ್ಯ ಭಟ್ said...

ನಿಮ್ಮ ಸಮಯೋಚಿತ ಸಲಹೆಗಳಿಗೆ ತುಂಬಾ ಕೃತಜ್ಞತೆಗಳು . ಕುತೂಹಲದ ವಿಷಯವೆಂದರೆ ಈ ಪದ್ಯ ಒಂದೊಂದು ಕಡೆ ಒಂದೊಂದು ರೀತಿ ಪ್ರಯೋಗದಲ್ಲಿದೆ. ಮೇಲೆ ಹೇಳಿದ ಸಾಲುಗಳೂ ಇದರಲ್ಲಿವೆ. ಅಂತೂ ಮಕ್ಕಳಿಗೆ ಯಾವುದು ಕಲ್ಪನೆಗೆ ನಿಲುಕುತ್ತವೆಯೋ ಅದನ್ನು ಸೇರಿಸಿಕೊಂಡು ಹಾಡಿದರೆ ತಪ್ಪಿಲ್ಲವೆನಿಸುತ್ತದೆ. ತಮ್ಮ ಪರಿಸರದ ಬೇರೆ ಬೇರೆ ಜೀವಿಗಳ ಕುರಿತ ಪರಿಚಯಾತ್ಮಕ ವಾದ ಈ ಕವಿತೆಯನ್ನು ನಾನು ಎರಡನೇ ತರಗತಿಯಲ್ಲಿದ್ದಾಗ ನಮ್ಮ ಟೀಚರ್ ಅಭಿನಯ ಸಮೇತ ಮಾಡಿ ತೋರಿಸುತ್ತಿದ್ದುದು ಈಗಲೂ ನೆನಪಿದೆ .

Roopa said...

ನಿಮ್ಮ ಮಾತು ನಿಜ. ಇದಕ್ಕೊಂದು ಒಳ್ಳೆಯ ಉದಾಹರಣೆ. ಆನೆ ಬಂತೊಂದಾನೆ.. ಇದನ್ನು ಬಹಳಷ್ಟು ಬೇರೆ ಬೇರೆ ರೀತಿಯಲ್ಲಿ ಹಾಡೊದನ್ನ ಕೇಳಿದ್ದೀನಿ. ನಾನು ಶಾಲೆಯಲ್ಲಿ ಕನ್ನಡ ಕಲಿತದ್ದು ಮೂರನೆ ಭಾಷೆಯಾಗಿ, ಅದೂ ೫ನೆ ತರಗತಿಯಿಂದ.. ಹಾಗಾಗಿ ನನ್ನ ಕಲಿಕೆಯೆಲ್ಲ ಅಮ್ಮನಿಂದಲೇ!!

ಸುಬ್ರಹ್ಮಣ್ಯ ಭಟ್ said...

ಹೌದು . ಆನೆ ಬಂತೊಂದಾನೆ .. ನನ್ನ ಪ್ರೀತಿಯ ಪದ್ಯಗಳಲ್ಲಿ ಒಂದು..
ನಾನು ಒಂದನೇ ತರಗತಿಯಿಂದ ೧೦ನೆ ತರಗತಿ ವರೆಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ್ದು. ಆದರೆ ನನ್ನ ತರಗತಿ ಭಾಷೆ ತುಳು ಆಗಿತ್ತು ! ಮನೆಯಲ್ಲಿ ಅಮ್ಮ ಹೇಳುತ್ತಿದ್ದ ಕಥೆ ಪದ್ಯಗಳು ಇತ್ಯಾದಿ ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿದೆ .
ಅಮ್ಮನೇ ಮೊದಲ ಗುರು. ಮನೆಯೇ ಮೊದಲ ಪಾಠಶಾಲೆ ಎಂಬುದು ನೂರು ಪ್ರತಿ ಶತ ಸತ್ಯ !

Anonymous said...

good one. vedio link also good. thank you sir and madam for the song and vedio clip