skip to main |
skip to sidebar
ಬಾಲ ಮುದ್ದು ಕೃಷ್ಣ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಂದನು ಮುದ್ದು ಕೃಷ್ಣ
ಬೆಣ್ಣೆ ಮುದ್ದೆ ಕದ್ದು
ತಿನ್ನೋ ಕಳ್ಳ ಕೃಷ್ಣ !
ನವಿಲ ಗರಿಯ ಸೊಗಸಿಗೆ
ಮನಸೋತ ಕೃಷ್ಣ
ತೆಗೆದು ತಲೆಯೊಳಿರಿಸಿ
ಮೆರೆವ ಪುಟಾಣಿ ಕೃಷ್ಣ
ಬಾರೋ ಬಾರೋ ನನ್ನ ಬಳಿ
ಬೇಗನೆ ಕೃಷ್ಣ
ಹಾಲು ಮೊಸರು ಬೆಣ್ಣೆ ಕೊಡುವೆ
ತಿನ್ನೋ ಕೃಷ್ಣ
(ಕವಿ :ಸುಬ್ರಹ್ಮಣ್ಯ ಭಟ್)
***
5 comments:
bahaLa chandada kavana
sundara blaagu
oLLeyadaagali
gurudEva dayaa karo deena jane
ಓಯ್, ಈ ಪಟ ಒಲ್ತು ಒಯ್ತರ್ ಮರ್ರೆ? ಬಾಲೆ ಪೊರ್ಲು ಉಂಡು. ಏರ್?
ನಮ್ಮ ಕೃಷ್ಣ ನಿಮ್ಮ ಅಂಗಳದಲ್ಲೂ ನಲಿಯುತಿರುವುದು
ನೋಡಿದೆ.ಸಂತೋಷ.ಇನ್ನು ಮುಂದೆ ನಂದಗೋಕುಲದಿಂದ ಫೋಟೋ ತೊಗೊಳುವಾಗ ನನಗೊಂದು ಮಾತು ತಿಳಿಸಿಬಿಡಿ ಪ್ಲೀಸ್....
ಮಾನ್ಯರೇ,
ನಂದಗೋಕುಲದಲ್ಲಿ ಇಬ್ಬರು ಕೃಷ್ಣರು!
ಎಂಬ ತಮ್ಮ ಫೋಟೋ ಬ್ಲಾಗನ್ನು ಇದೆ ಫೆ. ೧೧ ರಂದು ನೋಡಿದ್ದೆ. ಅದನ್ನು ನೋಡಿದಾಗ ಮುದ್ದು ಕೃಷ್ಣನ ಮುಗ್ಧತೆಯನ್ನು ಕಂಡು ಅವನಿಗೋಸ್ಕರ ಒಂದು ಕವನ ಬರೆದೆ. ಅದನ್ನು ಅವನಿಗೆ ಅರ್ಪಿಸಿ ಒಂದು ವಾಕ್ಯವನ್ನು ತಮ್ಮ ಬ್ಲಾಗ್ ನ ಇದೇ ಶಿರೋನಾಮೆ ಕೆಳಗೆ ಬರೆದೆ (muddu krishna tumabaa muddagiddane. avanigaagi ee nanna kavana www.puttanaputa.blogspot.com ನಲ್ಲಿ) . ಆಮೇಲೆ ತಮ್ಮ ಪೂರ್ವಾನುಮತಿ ಇಲ್ಲದೆ ಈ ಪದ್ಯಕ್ಕೆ ಸ್ಪೂರ್ತಿಯಾದ ಅವನ ಫೋಟೋವನ್ನು ಹಾಕಿದೆ. ತಮ್ಮ ಇಮೇಲ್ ವಿಳಾಸ ನನ್ನ ಬಳಿ ಇಲ್ಲವಾದುದರಿಂದ ತಮ್ಮ ಅನುಮತಿಯನ್ನು ಕೇಳಲು ಸಾಧ್ಯವಾಗಲಿಲ್ಲ . ಕ್ಷಮಿಸಿ.
manyavenur@gmail.com
sir,
i liked your sense of humour.
instead of that photo you could have selected some other photo to avoid copy right problems.
wish you all the best. keep writing meaningful poems for kids.
Post a Comment