ಆಮೆಯೊಂದು ಕೆರೆಯ ದಡದಿ
ಮನೆಯ ಮಾಡಿತು
ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು
ಎಂದು ಬಯಸಿತು
ಗೆಳೆಯ ಹಕ್ಕಿಗಳನು
ಕಂಡು ಆಸೆ ತಿಳಿಸಿತು
ಹಕ್ಕಿಯೆರಡು ಆಮೆ
ಮಾತ ಒಪ್ಪಿಕೊಂಡವು
ಅತ್ತ ಇತ್ತ ಹಕ್ಕಿಯೆರಡು
ಬಾಡಿಗೆ ಹಿಡಿದವು
ಆಮೆ ಅದಕೆ ಜೋತು ಬೀಳೆ
ಹಾರಿಹೋದವು
ದಾರಿಯಲ್ಲಿ ಇದನು ಕಂಡ
ಜನರು ನಕ್ಕರು
ಮಾನ ಹೋಯಿತೆಂದು ಆಮೆ
ಮನದಿ ಕುದಿಯಿತು
ನಕ್ಕ ಜನರ ಬೈಯ್ಯಲೆಂದು
ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು
ಸತ್ತು ಹೋಯಿತು !
***
2 comments:
ಈ ಪದ್ಯವನ್ನು ಇಲ್ಲಿ ಪ್ರಕಟಿಸಿದಕ್ಕೆ ಢನ್ಯವಾದಗಳು.
ನಾನು ಬಹು ದಿನಗಳಿಂದ ಶಾಲೆಯಲ್ಲಿ ಕಲಿತ "ಚಂದಪ್ಪನ ಶಾಲೆ" ಎಂಬ ಪದ್ಯವೊಂದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿರುವೆನಾದರು ಪೂರ್ತಿ ಪದ್ಯ ನೆನಪಿಗೆ ಬರುತಿಲ್ಲ, ನಿಮಗೆಬನದರು ಈ ಪದ್ಯ ನೆನಪಿದ್ದರೆ ನಇಮ್ಮ ಈ ಬ್ಲಾಗಿನಲ್ಲಿ ಪ್ರಕಟಿಸಿರೆಂದು ಪ್ರಾರ್ಥನೆ.
ಪದ್ಯದ ಕೆಲ ಸಾಲುಗಳು ಕೆಳಗಿನಂತಿವೆ:
ಆಗಸವೆಂಬುದು ವಿಶಾಲ ಶಾಲೆ
ಇರುಳಲಿ ಮಾತ್ರವೆ ನಡೆಯುವುದು
ಬಾನಿನ ಅಂಗಳ ತುಂಬುತ ತುಂಬುತ
ಶಾಲೆಯ ಅಂಗಳವಾಗುವುದು..
ಕೃಷ್ಣ ಆರ್ ಎಮ್
ಆಗಸವೆಂಬುದು ವಿಶಾಲ ಶಾಲೆ
I faintly remember..
ಚುಕ್ಕಿಗಳೆಲ್ಲ ಶಾಲೆಯ ಮಕ್ಕಳು
ಚಂದಿರ ಅವರಿಗೆ ಶಿಕ್ಷಕನು
ಸುಂದರ ಹಾಡನು ಕಳಿಸುತ ನಾದನು
ತಳ ತಳ ತಳ ಎಂದು ಮೆರಿಯುವನು.
Post a Comment