ಹಕ್ಕಿಯ ತೆರದಲಿ ನಭದಲಿ ಹಾರುವೆ
ರೆಕ್ಕೆಗಳೆನಗಿಲ್ಲ
ಮರಿಗಳ ಹೆರುತಲಿ ಮೊಲೆಯನ್ನುಣಿಸುವೆ
ಕಾಡಿನ ಮೃಗವಲ್ಲ !
ಕರಿ ಕರಿ ಬಣ್ಣದ ಕೊಡೆಯನು ಬಿಡಿಸುತ
ಅಲೆವೆನು ಇರುಳಲ್ಲಿ
ಎನ್ನಯ ಬಂಧುಗಳೆಲ್ಲರ ಕೂಡುತ
ನಿದ್ರಿಪೆ ಹಗಲಲ್ಲಿ
ಮೊಗವಿದೆ ಕಿವಿಯಿದೆ ಹಲ್ಲುಗಳೆನಗಿವೆ
ಬಾಲವು ಎನಗಿಲ್ಲ
ಕಾಳುಗಲೆರಡಿದ್ದರು ನಾನೆಲದಲಿ
ನಡೆಯುವ ಪರಿಯಿಲ್ಲ
ವೃಕ್ಷಗಳಲಿ ತಲೆಕೆಳಗಿರಿಸುತ
ತೊಟ್ಟಿಲ ತೂಗುವೆನು
ತೋಟಗಳಲ್ಲಿ ಬೇಟೆಯನಾಡುತ
ಹಣ್ಗಳನುಣ್ಣುವೆನು
ಬಾವಿಯ ಆದಿಲಿ ಭವನದ ನಡುವಲಿ
ಬೇಲಿಯ ಕೊನೆಯಲ್ಲಿ
ಬೇಲಿಯ ಕೊನೆಯಲ್ಲಿ
ಎನ್ನದೆ ಹೆಸರಿದೆ ತಟ್ಟನೆ ಪೇಳಿರಿ
ಮೂರಕ್ಷರಗಳಲಿ !
(ಕವಿ : ಮುಂಡಾಜೆ ರಾಮಚಂದ್ರ ಭಟ್ )
***
No comments:
Post a Comment