Thursday, November 19, 2009

ಚಂದಿರ ಬಾ ಬಾರೋ ..





ಮಾಮರದೆಡೆಯಲಿ

ಮೋಡದ ಮರೆಯಲಿ

ಚಲಿಸುವ ಚಂದಿರ ಬಾ ಬಾರೋ



ತಿಂಗಳ ಬೆಳಕಿನ
ತಂಪಿನ ಕಿರಣವ
ಬೀರುವ ಚಂದಿರ ಬಾ ಬಾರೋ


ಹೂವಿನ ಪರಿಮಳ
ತಣ್ಣನೆ ಗಾಳಿಯ
ಜೊತೆ ಸೇರುತ ನೀ ಬಾ ಬಾರೋ


ಅಮ್ಮನ ಜೊತೆಗೆ
ಹಾಡನು ಹಾಡುತ
ಕಾಯುವೆ ನಿನಗೆ ಬಾ ಬಾರೋ
***

2 comments:

Anonymous said...

super song bhatre...
keep it up!

chirantana said...

ಮುದ್ದಾದ ಪದ್ಯ. ತುಂಬಾ ಚೆನ್ನಾಗಿದೆ :)