ಕಲ ಕಲ ಸದ್ದನು
ಮಾಡುತ ಮೆಲ್ಲನೆ
ಹರಿಯುವ ಸುಂದರ ನದಿ
ನೀರವ ಕಾಡಿನ
ನಡುವೆ ಸಾಗುತ
ಸೇರುವೆ ಸಾಗರ ತುದಿ
ಸಾಗುವ ದಾರಿಗೆ
ವೇಗವ ಪಡೆಯುತ
ಧುಮ್ಮುಕ್ಕುವ ಝರಿ
ಲೋಕದ ಜನರ
ಜೀವನ ಬೆಳಗಲು
ಸಂಪದ ನೀಡುವ ನದಿ
ಪಾಪವ ಕಳೆಯೆ
ಸ್ನಾನವ ವಿರಚಿಸೆ
ಶುದ್ಧ ತೀರ್ಥವೀ ನದಿ
***
ಮುಗ್ಧ ಮನಸಿನ ಸುಪ್ತ ಸಂತೋಷ ....
3 comments:
ನಮಸ್ತೆ....ನನ್ನಪ್ಪ ನನ್ನ ಬ್ಲಾಗ್ನಲ್ಲಿ ನಿಮ್ಮ ಬ್ಲಾಗ್ ಲಿಂಕ್ ಕೊಟ್ಟಿದ್ದಾರೆ. ಓಕೆನಾ?
ಬಹಳ ಸಂತೋಷ ... ಇಲ್ಲಿನ ಪದ್ಯಗಳನ್ನು ಸವಿಯಲು ಎಲ್ಲರಿಗೂ ಮುಕ್ತ ಅವಕಾಶವಿದೆ. ನಿಮ್ಮ ಅನಿಸಿಕೆಗಳಿಗೆ ಸದಾ ಸ್ವಾಗತವಿದೆ.
http://arora1.rapidmile.hop.clickbank.net/
Post a Comment