ಮುಚ್ಚು ಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ ..ಮುಚ್ಚು..
ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ
ಗಂಗೆ ತಾನೋದ್ಭವಿಪ ನಿನ್ನಡಿಯ ಸೋಕಿಂಗೆ
ನರಕ ತಾನುಳಿಯುವುದೆ ನರಕವಾಗಿ ..ಮುಚ್ಚು ..
ಶಾಂತ ರೀತಿಯೊಳಿಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೊ ಓ ಅನಂತ
ನನ್ನ ನೀತಿಯ ಪುರುಡಿನಿಂದೆನ್ನ ರಕ್ಷಿಸೆ
ನಿನ್ನ ನೀತಿಯ ಬೆಳಕಿನ ಆನಂದಕ್ಕೆ ...ಮುಚ್ಚು ...
-ಕುವೆಂಪು
***
4 comments:
idu makkala padya alla...!
ಮಾನ್ಯರೇ ,
ನನ್ನ ನವನೀತವನ್ನು ನೋಡಿ ಸೂಕ್ತ ಸಮಯದಲ್ಲಿ ಪ್ರತಿಕ್ರಯಿಸಿದ್ದಕ್ಕಾಗಿ ಧನ್ಯವಾದಗಳು .
ನನ್ನದೊಂದು ಅರಿಕೆ :
ಈ ಪದ್ಯವನ್ನು ನಾನು ೬ ನೆ ತರಗತಿಯಲ್ಲಿದ್ದಾಗಲೇ ನನ್ನ ಸಹಪಾಠಿಗಳು "ಭಾವಗೀತೆ " ಸ್ಪರ್ಧೆಗೆ ಹಾಡುತ್ತಿದ್ದರು .ಒಳ್ಳೆಯ ಅರ್ಥಪೂರ್ಣ ಪದ್ಯವಾದುದರಿಂದ ಇಲ್ಲಿ ಬರೆದಿದ್ದೇನೆ . ನವನೀತವು ಎಲ್ಲ ವಯೋಮಾನದ ಮಕ್ಕಳಿಗಾಗಿ ಇರುವ ಬ್ಲಾಗ್ . ಅತಿ ಕಿರಿಯ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ (ಕೆಲವೊಮ್ಮೆ ಅವರನ್ನು ಸಿದ್ಧಗೊಳಿಸುವ ಅಪ್ಪ -ಅಮ್ಮಂದಿರಿಗೂ !) ಇರುವ ಪದ್ಯಗಳ ಸಂಗ್ರಹ , ಸ್ವರಚಿತ ಕವನಗಳು ಇವೆಲ್ಲದರ ಸಂಕಲನವಾಗಿದೆ . ಇಲ್ಲಿರುವ ಒಳ್ಳೆಯ ವಿಚಾರಗಳನ್ನಷ್ಟೇ ಸ್ವೀಕರಿಸಬೇಕಾಗಿ ವಿನಂತಿ .
ಇತಿ
ಸುಬ್ರಹ್ಮಣ್ಯ ಭಟ್
manyavenur@gmail.com
dear all,
here is a link to this song sung by Aparna Bhat from Bangalore
http://www.youtube.com/watch?v=LB1lkbEhpOY
dear sir, just you see the vedio clip. even that kid also doesn't know the meanig of the song !
May be after explaining the meaning of this song children may give better expression...
Post a Comment