ಇವನೆ ನೋಡು ಅನ್ನದಾತ
ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು
ಮಳೆಯ ಗುಡುಗು ಚಳಿಯ ನಡುಗು
ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ
ಒಂದೇ ಸವನೆ ದುಡಿಯುತ
ಗಟ್ಟಿ ದೇಹ ದೊಡ್ಡ ಮನಸು
ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ
ಅನ್ನ ನೀಡುತಿರುವನು
ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು
ಮಳೆಯ ಗುಡುಗು ಚಳಿಯ ನಡುಗು
ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ
ಒಂದೇ ಸವನೆ ದುಡಿಯುತ
ಗಟ್ಟಿ ದೇಹ ದೊಡ್ಡ ಮನಸು
ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ
ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು
ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ
ಹೊಂದಿಕೊಂಡು ನಡೆವರು
(ಕವಿ : ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ)
***
6 comments:
ಈ ಕೆಳಗಿನ ಪ0ಕ್ತಿಗಳು ನನ್ನ ಮೆಚ್ಚಿನವಾಗಿದ್ದುವು.
ಇವನ್ನು ಕ0ಠಪಾಠ ಮಾಡಿದ ನೆನಪು ಇನ್ನೂ ಇದೆ.
ಇದನ್ನು ಪೂರ್ಣಗೊಳಿಸುವರೆ ನಿಮ್ಮ ಸಹಾಯ ಬೇಕು.
ಸುಬ್ರಹ್ಮಣ್ಯ ಭಟ್ಟರ ಸ0ಕಲನದ ಈ ಪ್ರಯತ್ನ ಸಫಲವಾಗಲಿ.
(ಕವಿಗಳು ಪ0ಜೆ ಮ0ಗೇಶರಾಯರೆ0ದು ನನ್ನ ಅನಿಸಿಕೆ.)
ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಮೂಡಣ ರ0ಗಸ್ಥಳದಲಿ
ನೆತ್ತರ ಮಾಡುವನು ಕುಣಿದಾಡುವನು.
.........
ಏರುವನು ರವಿ ಏರುವನು...
..........
ಏರಿದವನು ಚಿಕ್ಕವನಿರಬೇಕೆಲೆ
ಎ0ಬೀ ಮಾತನು ಸಾರುವನು
Aadr indu paristhithi hegide andare
ondu vichithra venendare
"ANNADATHANA HOTTEYALLI HUTTI TUTTHU ANNAKKE PARADADUTHIRUVA RANA HEDIGALU NAVELLA" badukiddu sattha hage agide?????
ತಮಗೆ ಅನಂತ ಧನ್ಯವಾದಗಳು. "ಇವನೇ ನೋಡು ಅನ್ನದಾತ" ಪದ್ಯವನ್ನು ಮಗಳಿಗೆ ಹೇಳಿ ಕೊಡಲು ಹುಡುಕುತ್ತಿದ್ದೆ, ನಿಮ್ಮ ಬ್ಲಾಗ್ನಲ್ಲಿ ಸಿಕ್ಕಿತು.
ಇವನೇ ನೋಡು ಅನ್ನದಾತ ನಾವು ಶಾಲೆಯಲ್ಲಿ ಕಲಿತ ಪದ್ಯ.
Tq nanna magalige nanu 3rd std padyavanna indu nanna magalige helida padya 05/06/1982 my brt nanna magalu tumba kushiyadlu
ಏರುವನು ರವಿ ಏರುವನು
ಬಾನಲಿ ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಲೇ ಬೇಕೆಲೆ
ಎಂಬಾ ಮಾತನು ಸಾರುವನು
Post a Comment