ಪುಟ್ಟನೊಂದು ಬಾಳೆಹಣ್ಣು ಸುಲಿದು ತಿಂದನು
ಸುಲಿದು ತಿಂದು ಸಿಪ್ಪೆಯನ್ನು ನೆಲಕೆ ಒಗೆದನು
ಪುಟ್ಟನೊಡನೆ ಮಾತನಾಡೆ ನಾಣಿ ಬಂದನು
ಓಡಿ ಬಂದು ಸಿಪ್ಪೆ ತುಳಿಯೆ ಜಾರಿ ಬಿದ್ದನು
ಹಿಡಿದು ಪುಟ್ಟನವನ ಜುಟ್ಟು ಏಟು ಕೊಟ್ಟನು
ತಪ್ಪನರಿತ ಪುಟ್ಟ ಸಿಪ್ಪೆಯನ್ನು ತಿಪ್ಪೆಗೆಸೆದನು
ಜಾಣ ಬಾಲನಂತೆ ತನ್ನ ಮನೆಗೆ ನಡೆದನು
-ಮಂಜೇಶ್ವರ ಗೋವಿಂದ ಪೈ